ಪ್ರಾತಃ ಕಾಲದ ಪ್ರಾರ್ಥನೆ (#9466)

ಓ ಭಗವಂತ, ನಿನ್ನ ರಕ್ಷಣೆಯಲ್ಲಿ  ಎಚ್ಚರಗೊಂಡೆ, ಯಾರು ಈ ರಕ್ಷಣೆಯನ್ನು ಅಪೇಕ್ಷಿಸುವರೋ  ಅವರಿಗೆ ಅದು ಲಭ್ಯ. ನಿನ್ನ ರಕ್ಷಣೆಯ ಪವಿತ್ರ ನೆಲೆಯಲ್ಲಿ, ನಿನ್ನ ಆ ಬಲವತ್ತರವಾದ ಕೊತ್ತಲದಲ್ಲಿ ಯಾರು ನೆಲೆಸಲು ಇಚ್ಛಿಸುವರೋ ಅವರಿಗೂ  ಅದು ಪ್ರಾಪ್ತಿಯಾದೀತು.   ಓ ನನ್ನ ಪ್ರಭುವೇ, ನನ್ನ ಅಂತರಾತ್ಮವನ್ನು ನಿನ್ನ ಸಾಕ್ಷಾತ್ಕಾರದ ದಿವ್ಯಜ್ಯೋತಿಯಿಂದ ಬೆಳಗಿಸು.  ನನ್ನ ಬಾಹ್ಯ ಸ್ಥಿತಿಯನ್ನು  ನಿನ್ನ ಪ್ರಸನ್ನತೆಯ ಬೆಳಕಿನ ಕಿರಣದಿಂದ ಬೆಳಗಿಸಿದಂತೆಯೇ ಬೆಳಗಿಸುವವನಾಗು.

-Bahá'u'lláh
-----------------------

